00:00
04:13
ನಾ ಸನಿಹಕೆ ಇನ್ನು ಹೇಗೆ ಬರಲಿ
ಈ ಸಮಯವು ಇಲ್ಲೇ ನಿಂತು ಬಿಡಲಿ
ನಿನ್ನ ಮೌನದ ಅನುವಾದ ಮಾಡಲು
ನಾ ಯಾರ ಕೇಳಲಿ
ಹೇಳಲು ಹೋದರೆ ಸೋಲುವ ಅಂಜಿಕೆ
ಹೇಳದೆ ಹೋದರೆ ಬಾಳಲಿ ಏತಕೆ
ಎಲ್ಲ ಗಾಡಿಯನ್ನು ದಾಟಿ ಬರಲೇನು
ನಾನು ನನ್ನಂತೆ ಚೂರು ಇರಲೇನು
ಮನಸಿನ ಮೋಡ ಕಟ್ಟಿದೆ
ಸುರಿಮಳೆ ಸುರಿಯೋ ಹಾಗಿದೆ
ನೆನೆಯಲೇ ಮೆಲ್ಲನೆ
ನಾ ಸೇರಿ ನಿನ್ನನೇ
ಹೇಳಲು ಹೋದರೆ ಸೋಲುವ ಅಂಜಿಕೆ
ಹೇಳದೆ ಹೋದರೆ ಬಾಳಲಿ ಏತಕೆ
ಓ... ಕೈಯ್ಯ ಚಾಚಿದರೆ ಚಂದ್ರ ಸಿಕ್ಕುವನು
ಓ... ನಾನೇ ಕಟ್ಟಿರುವೆ ನನ್ನ ಕೈಯನ್ನು
ನಡೆದರೂ ನಿನ್ನ ಸಂಗಡ
ಅಗಳುವ ನೋವು ಮುಂಗಡ
ಏತಕೆ ಈ ದಿನ
ಇಷ್ಟೊಂದು ಮೌನಿ ನಾ
ಹೇಳಲು ಹೋದರೆ ಸೋಲುವ ಅಂಜಿಕೆ
ಹೇಳದೆ ಹೋದರೆ ಬಾಳಲಿ ಏತಕೆ
ಏತಕೆ ಈ ದಿನ
ಇಷ್ಟೊಂದು ಮೌನಿ ನಾ
ಹೇಳಲು ಹೋದರೆ ಸೋಲುವ ಅಂಜಿಕೆ
ಹೇಳದೆ ಹೋದರೆ ಬಾಳಲಿ ಏತಕೆ